ಸಂಸ್ಕೃತದಲ್ಲಿ ಹಾಸ್ಯ – ಭಾಗ ೧

ಸುಮಾರು ೧೦ (10) ವರುಷಗಳ ಹಿಂದೆ ಕರ್ಣಾಟಕದ ಜನಪ್ರಿಯ ವಾರ ಪತ್ರಿಕೆಯಾದ “ತರಂಗ”ದಲ್ಲಿ ಪ್ರಕಟವಾದ ಲೇಖನಿ “ಸಂಸ್ಕೃತದಲ್ಲಿ ಹಾಸ್ಯ”. ಅದರಲ್ಲಿ ಕೆಲವು ಶ್ಲೋಕಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.

 

चिताम् प्रज्वलिताम् दृष्ट्वा वैद्यो विस्मयमागतः ।
नाहङ्गतो नमे भ्राता कस्यैदं हस्त लाघवम्? ॥

ಚಿತಾಂ ಪ್ರಜ್ವಲಿತಾಂ ದೃಷ್ಟ್ವಾ ವೈದ್ಯೋ ವಿಸ್ಮಯಮಾಗತಃ |
ನಾಹಂಗತೋ ನಮೇ ಭ್ರಾತಾ ಕಸ್ಯೇದಂ ಹಸ್ತಲಾಘವಂ ||

chitAm prajvalitAm dRSTvA vaidyo vismayamAgataH |
nAhaGgato name bhrAtA kasyedaM hasta lAghavam ||

 

ವೈದ್ಯನೊಬ್ಬ ಪಕ್ಕದೂರಿನಿಂದ ತನ್ನೂರಿಗೆ ಹಿಂದಿರುಗುತ್ತಿದ್ದಾಗ, ಊರ ಹೊರಗಿನ ಶ್ಮಶಾನದಲ್ಲಿ ಚಿತೆಯೊಂದು ಉರಿಯುತ್ತಿದ್ದುದನ್ನು ಕಂಡು ಆಶ್ಚರ್ಯಚಕಿತನಾಗಿ – “ಇದೇನು, ನಾನೂ ಊರಲ್ಲಿರಲಿಲ್ಲ, ನನ್ನ ಸಹೋದರನೂ (ಅವನೂ ವೈದ್ಯ ಭಾನುವೇ!) ಇರಲಿಲ್ಲ. ಹಾಗಾದರೆ ಯಾರ ಕೈ ಚಳಕದಿಂದ (हस्त लाघवम्) ಚಿತೆ ಉರಿಯುತ್ತಿರುವುದು?”

ಆಂಗ್ಲದಲ್ಲಿ ಇದನ್ನು ಅನುವಾದಿಸಲು ನಾನು ಪ್ರಯತ್ನಿಸಿದ್ದೇನೆ. ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ, ತಿದ್ದುಪಡಿಗಳನ್ನು ದಯವಿಟ್ಟು ತಿಳಿಸಿ.

A doctor (vaidya) returning from a neighbouring town is surprised on observing a funeral pyre burning at the cemetery and thinks thus – “Oh! what is this?, I was absent from this town and so was my brother (who himself is a very “capable” doctor indeed). Then, pray whose handiwork (हस्त लाघवम्) is it that the funeral pyre is burning?”

 

वैद्यराज नमस्तुभ्यम् यमराज सहोदर ।
यमस्तु हरति प्राणान् वैद्यः प्राणान् धनानिच ॥

ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ |
ಯಮಸ್ತು ಹರತಿ ಪ್ರಾಣಾನ್ ವೈದ್ಯಃ ಪ್ರಾಣಾನ್ ಧನಾನಿಚ ||

vaidyarAja namastubhyam yamarAja sahodara |
yamastu harati prANAn vaidyaH prANAn dhanAnica ||

 

ನಿತ್ಯ ರೋಗಿಯೊಬ್ಬನ ಉದ್ಗಾರ – “ಅಯ್ಯಾ (ಅಯ್ಯೋ!) ವೈದ್ಯರಾಜನೆ, ಯಮರಾಜನ ಸಹೋದರನಾದ ನಿನಗಿದೋ ವಂದನೆ. ಯಮರಾಜನು ನಮ್ಮ ಪ್ರಾಣಗಳನ್ನಷ್ಟೇ ಒಯ್ಯುತ್ತಾನೆ. ನೀನಾದರೋ, ಪ್ರಾಣಗಳ ಜೊತೆಗೆ, ನಮ್ಮ ಹಣವನ್ನೂ ಕೊಂಡೊಯ್ಯುವೆ!”

A chronic patient’s fervent cry – “Oh! Doctor, the brother of Yama (God of Death), I salute thee. Yama only takes our lives, but you take not only our lives but also our wealth (धनम्).”

A humourous and a sad indictment on past doctors! Perhaps it holds good for today’s doctors too!!

Advertisements
Published in: on Saturday, September 27, 2008 at 12:41  Comments (1)  
Tags: , ,