ಸಂಸ್ಕೃತದಲ್ಲಿ ಹಾಸ್ಯ – ಭಾಗ ೪

ಅನರ್ಹರಿಬ್ಬರು ಪರಸ್ಪರ ಪ್ರಶಂಸೆ ಮಾಡಿಕೊಂಡರೆ ಹೇಗಿರುತ್ತೆ ಅಂತ ಸುಂದರವಾಗಿ ಸಂಸ್ಕೃತದಲ್ಲಿ ಹೀಗೆ ಹೇಳಿದ್ದಾರೆ:

 

ऊष्ट्रानान्च विवाहेषु गानं गायन्ति गार्धभाः ॥
परस्परं प्रशंसन्ति “अहो रूपम्! अहो ध्वनिः!” ॥॥

 

ಊಷ್ಟ್ರಾನಾಂಚ ವಿವಾಹೆಷು ಗಾನಂ ಗಾಯಂತಿ ಗಾರ್ಧಭಾಃ |
ಪರಸ್ಪರಂ ಪ್ರಶಂಸಂತಿ “ಅಹೋ ರೂಪಂ! ಅಹೋ ಧ್ವನಿಃ!” ||

 

USTrAnAnca vivAheSu gAnam gAyanti gArdhabhAH |
parasparaM prazasanti “aho rUpam! aho dhvaniH!” ||ಅನುವಾದ: ಒಂಟೆಯ ಮದುವೆಯಲ್ಲಿ ಕತ್ತೆಯು (गार्धभ) ಹಾಡಿತಂತೆ. ಕತ್ತೆಯ ಗಾನ ಕಛೇರಿ ಮುಗಿದಮೇಲೆ, ಇಬ್ಬರೂ ಪರಸ್ಪರ ಪ್ರಶಂಸೆ ಹೀಗಿತ್ತು: “ಆಹಾ ಎಂತಹ ರೂಪ! ಆಹಾ ಎಂತಹ ಧ್ವನಿ!”. 


Translation: During the camel’s marriage, the Donkey sang! Both heaped praise on each other thus: “Oh! What beauty! oh! what a voice!”.


ಭಾವಾರ್ಥ: ಒಂಟೆಯ ಸೌಂದರ್ಯ ಹಾಗು ಕತ್ತೆಯ ಸಿರಿಕಂಠದ ಬಗ್ಗೆ ಹೇಳಬೇಕಾದ್ದೇನೂ ಇಲ್ಲ. ಇಬ್ಬರೂ ತಮ್ಮನ್ನು ತಾವು ಪ್ರಶಂಸಿಸಿ ಕೊಂಡರೆಂದರೆ ಅದಕ್ಕೆ ಬೆಲೆ ಉಂಟೆ? ನಮ್ಮ ರಾಜಕಾರಣಿಗಳು ಭ್ರಷ್ಟ ಅಧಿಕಾರಿಗಳನ್ನು ಪ್ರಶಂಸೆ ಮಾಡಿದ ಹಾಗೆ ಆಗುವುದಿಲ್ಲವೇ?

Advertisements
Published in: on Tuesday, April 20, 2010 at 17:45  Leave a Comment  
Tags: ,