ಲಾಲಿ ಹಾಡು

ಈ ಲಾಲಿ ಹಾಡು ನನ್ನ ಮಗನನ್ನು ಮಲಗಿಸಲು ನನ್ನ ಹೆಂಡ್ತಿ ಹಾಡ್ತಾಳೆ. ಕೇಳಿ ಕೇಳಿ ಈಗ ನನಿಗು ಅದು ಕಂಠ ಪಾಠ ಆಗಿದೆ! ಬಹಳ ಸೊಗಸಾಗಿದೆ ಈ ಹಾಡು, ಪುಂಡರೀಕನ  ಕುರಿತು ಬರೆದಿರುವುದು. ಅದರ ಸಾಹಿತ್ಯ ಹೀಗಿದೆ. ಬರೆದಿರುವವರು ಯಾರು ಅಂತ ನಾ ಅರಿಯೆ ಆದರೆ ಅವರಿಗೆ ಇಂತಹ ಸೊಗಸಾದ ಸರಳವಾದ ಹಾಡು ಬರೆದಿರುವುದಕ್ಕೆ ನನ್ನ ಅನಂತ ನಮಸ್ಕಾರಗಳು.

ಪಲ್ಲವಿ

ಜೋ ಜೋ ಶ್ರೀ ಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ ಮುಕುಂದ
ಜೋ ಜೋ ಜೋ

ಚರಣ

ಪಾಲ ಕಡಲೊಳು ಪವಡಿಸಿದವನೇ
ಆಲದೆಲೆಯ ಮೇಲೆ ಮಲಗಿದ ಶಿಶುವೆ

ಶ್ರೀ ಲತಾಂಗಿಯರ ಚಿತ್ತದೊಲ್ಲವನೆ
ಬಾಲ ನಿನ್ನನು ಪಾಡಿ ತೂಗುವೆನಯ್ಯ
ಜೋ ಜೋ ಜೋ

ಗುನನಿಧಿಯೇ ನಿನ್ನನೆತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ

ಮನಕೆ ಸುಖ ನಿದ್ರೆ ತಂದುಕೋ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು
ಜೋ ಜೋ ಜೋ

ಅಂಡಜ ವಾಹನನೆ ಅನಂತಾ ಮಹಿಮಾ
ಪುಂಡರೀಕಾಕ್ಷ ಶ್ರೀ ಪರಮ ಪಾವನನೇ

ಹಿಂಡು ದೈವದ ಖಂಡ ಉದ್ಧಂಡನೆ
ಪುರಂಧರ ವಿಠಲನೆ ಪಾಡಿ ತುಗುವೇನೋ
ಜೋ ಜೋ ಜೋ

ಯಾರ ಕಂದ ನೀ ಯಾರ ನಿಧಿ ನೀ
ಯಾರ ರತ್ನವು ನೀನು ಯಾರ ಮನಿಕವೋ

ಸೇರಿತು ಎನಗೊಂದು ಚಿಂತಾಮಣಿ ಇಂದು
ಪೋರ ನಿನ್ನನು ಪಾಡಿ ತುಗುವೆನಯ್ಯ
ಜೋ ಜೋ ಜೋ
ಜೋ ಜೋ ಜೋ

Advertisements
Published in: on Friday, October 24, 2008 at 19:30  Leave a Comment  
Tags: