ನೀಲಾಂಜನ – ಪದದ ಅರ್ಥ ಮತ್ತು ಅನರ್ಥ!

ಇವತ್ತು ನಾನು ಸುಮ್ಮನೆ “browse” ಮಾಡುತ್ತಿರುವಾಗ, ನೀಲಾಂಜನ ಎಂಬ ಪದದ ನಿಜವಾದ ಅರ್ಥ ತಿಳಿದುಕೊಳ್ಳಬೇಕೆಂಬ ಹಂಬಲ ಹುಟ್ಟಿತು. ಏಕೆಂದರೆ ನಾನು ನೀಲಾಂಜನ ರವರ ಬ್ಲಾಗ್ ನ ಅನುಯಾಯಿ ಹಾಗು ಅಭಿಮಾನಿ ಕೂಡ!

 

ಸುಮಾರು ಹುಡುಕಿದರೂ ಸರಿಯಾದ ಅರ್ಥ ಸಿಗಲಿಲ್ಲ. ಸಿಕ್ಕ ಅರ್ಥಗಳೆಲ್ಲ – “ನೀಲಿ ಬಣ್ಣದ ಕಣ್ಣು ಉಳ್ಳವಳು” (blue eyed girl) ಎಂದು ತಪ್ಪಾಗಿ ಅರ್ಥ ಸೂಚಿಸುತ್ತಿದ್ದವು! ಹೋಗ್ಲಿ ಬಿಡು ಅನ್ನೋಣ ಅಂದ್ರೆ, ಒಂದೊಂದು ಭಾಷೆಯವರು ಇದು ತಮ್ಮ ಪದ ಎಂದು ಹೇಳಿಕೊಳ್ಳುತ್ತಿದ್ದರು (ಉದಾ: ಮರಾಠಿ ತಾಣವೊಂದರಲ್ಲಿ ಇದು ಮರಾಠಿ ಹೆಸರಂತೆ, ಇನ್ನೊಂದು ಬೆಂಗಾಲಿ ತಾಣದಲ್ಲಿ ಈ ಪದ ಬೆಂಗಾಲಿ ಮೂಲದಂತೆ). ಒಟ್ಟಿನಲ್ಲಿ ನೀಲಾಂಜನದ ಅರ್ಥ ಹುಡುಕಲು ಹೋಗಿ ಅನರ್ಥವಾಯಿತು ಅಷ್ಟೇ!

 

ನಂತರ ಇನ್ನೊಂದು ಹೊಳೆಯಿತು. ಶನೇಶ್ವರನ ಬಗ್ಗೆ ಒಂದು ಶ್ಲೋಕದಲ್ಲಿ ಹೀಗೆ ಹೇಳಿದ್ದಾರೆ:

 

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ!

ಛಾಯಾ ಮಾರ್ತಾಂಡ ಸಂಭೂತಂ ತಮ್ ನಮಾಮಿ ಶನೈಶ್ಚರಂ!!ಈ ಶ್ಲೋಕದಿಂದ ನನಗೆ ಒಂದು ಉಪಾಯ ಹೊಳೆಯಿತು. ಅದೇನೆಂದರೆ, ಸಂಸ್ಕೃತ ಪದಗಳ ಅರ್ಥ ಸೂಚಿಸುವ ತಾಣಗಳನ್ನು ಹುಡುಕುವುದು. ನನ್ನ ಈ ಅನ್ವೇಷಣೆ ಫಲಪ್ರದವಾದುದು ಈ ಎರಡು ತಾಣಗಳಿಂದ – http://webapps.uni-koeln.de/tamil/  ಮತ್ತು http://www.sanskrit-lexicon.uni-koeln.de/monier/indexcaller.php. ಈ ಎರಡೂ ತಾಣಗಳು ನನಂಗೆ ಕೊಟ್ಟ ಉತ್ತರ ಹೀಗಿದೆ:

 

नीलाञ्जन

(H3) नीला* ञ्जन [p= 566,3] [L=111657]

n. black antimony R.

[L=111658]

an unguent made of antimony and blue vitriol L. (v.r. °ला*श्मज)

 

ಈ ಎರಡು ತಾಣಗಳಲ್ಲದೆ ನಾನು ಮೇಲೆ ಹೇಳಿರುವ ಶ್ಲೋಕದ ಅರ್ಥ ಹುಡುಕಿದಾಗ, ಈ ತಾಣ ವನ್ನು ಕಂಡೆ. ಅದೂ ಅಲ್ಲದೆ, ಅಂಜನ ಎಂಬ ಪದಕ್ಕೆ ಅರ್ಥ ಹುಡುಕಿದೆ, ಕನ್ನಡ ಕಸ್ತೂರಿ ಯಲ್ಲಿ.

 

ನನ್ನ ಮುಂದಿರುವ ಎಲ್ಲ ಸಾಕ್ಷಿಗಳನ್ನು ಪರಿಶೀಲಿಸಿದ ನಂತರ, ನಾನು “ನೀಲಾಂಜನ” ಎಂಬ ಪದದ ಅರ್ಥ ಕೆಳಕಂಡಂತೆ ಇದೆ ಎಂದು ಅರ್ಥ ಮಾಡಿಕೊಂಡೆ. ನಾನು ಏನಾದ್ರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ದಯವಿಟ್ಟು ಅದನ್ನು ತಿದ್ದಿ!

 

ನೀಲಾಂಜನ – ಕಣ್ಣಿಗೆ ಕಾಡಿಗೆ ಹಚ್ಚುವ ನೀಲಿ ವರ್ಣದ ಪದಾರ್ಥ; dark-blue collyrium (for the eye)ಈ ಪ್ರಸಂಗದಿಂದ ತಿಳಿಯೋದು ಏನೆಂದರೆ, ಒಂದು ಪದದ ಅರ್ಥ ತಿಳಿದುಕೊಳ್ಳಬೇಕಾದರೆ ಹರಸಾಹಸ ಮಾಡಬೇಕು ಅಂತ!Advertisements
Published in: on Thursday, February 4, 2010 at 14:40  Comments (3)  
Tags: ,